"ಕನ್ನಡದ ಪ್ರತಿಭಾವಂತ ಹಾಗೂ ಸೃಜನಶೀಲ ನಿರ್ದೇಶಕರಲ್ಲೊಬ್ಬರಾದ ರಾಜೇಂದ್ರಸಿಂಗ್ ಬಾಬು ಅವರು ವಿಷ್ಣುವರ್ಧನ್ ಕುರಿತು ಪ್ರಜಾವಾಣಿ ಪತ್ರಿಕೆಯಲ್ಲಿ ಬರೆದ "ನೆನಪುಗಳ ಮುತ್ತಿನಹಾರ"ವಿದು. ವಿಷ್ಣುವರ್ಧನ್ ಅವರಂಥ ಮೇರು ನಟನ ಬಗ್ಗೆ ಬರೆಯುವುದು ಸವಾಲಿನ ಕೆಲಸ. ಬಾಬು ಅವರು ವಿಷ್ಣುವರ್ಧನ್ ಅವರನ್ನು ಅತಿ ಮಾನುಷನಂತೆ ಚಿತ್ರಿಸದೆ ನಮಗೆ ಗೊತ್ತಿಲ್ಲದ ವಿಷ್ಣುವರ್ಧನ್ ಅವರನ್ನು ಪರಿಚಯಿಸುತ್ತಾ ಹೋಗುತ್ತಾರೆ. ಅವರ ಗೆಳೆತನ, ಮೈತ್ರಿ, ಒಡನಾಟ ಸಂಬಂಧಗಳು ಎಷ್ಟೆಲ್ಲಾ ಪದರಗಳನ್ನು ಹೊಂದಿದೆಯೋ ಅವೆಲ್ಲವನ್ನೂ ಹಾಗೆಯೇ ನಮ್ಮ ಮುಂದೆ ಹರವಿಟ್ಟು ವಿಷ್ಣುವರ್ಧನ್ ಎಂಬ ಮೇರನ್ನು ಆಪ್ತವಾಗಿಸುತ್ತಾರೆ. ಇಷ್ಟೇ ಅಲ್ಲದೆ, ಈ ಕೃತಿ ನಿರ್ದೇಶಕನೊಬ್ಬನ ಅನುಭವ ಕಥನದ ಜೊತೆಗೆ ಕನ್ನಡದ ಚಿತ್ರರಂಗದ ಹಲವು ಮಜಲುಗಳನ್ನು ತೆರೆದಿಡುತ್ತಾ ಹೋಗುತ್ತದೆ."

ಎಸ್.ವಿ. ರಾಜೇಂದ್ರಸಿಂಗ್ ಬಾಬು

16 other products in the same category:

Product added to compare.