ಕೆಲವು ವರ್ಷಗಳ ಹಿಂದೆ ಎಂ.ಎಸ್.ಎನ್ ಅವರ 'ಸೆಕೆಂಡ್ ಹ್ಯಾಂಡ್ ಸದಾಶಿವ' ನಾಟಕವನ್ನು ಅಮೆರಿಕಾದ ೧೮ ಪ್ರಮುಖ ಸಂಸ್ಥಾನಗಳಲ್ಲಿ ನಾವು ಪ್ರದರ್ಶಿಸಿದ್ದೆವು. ಅಲ್ಲಿನ ಪ್ರೇಕ್ಷಕರು ಹುಚ್ಚೆದ್ದು ನಕ್ಕು ಆನಂದಿಸಿದ್ದು ನೆನಪಿನಲ್ಲಿ ಇನ್ನೂ ಹಸಿರಾಗಿದೆ. ಅವರ ತಂತ್ರ ಬಹಳ ಸರಳ. ಪ್ರತಿ ಪುಟದಲ್ಲಿ ಮೂರು ನಾಲ್ಕು ಕಡೆ ನಗೆ ಬರುವಂತೆ ಡೈಲಾಗ್ ರೆಡಿ ಮಾಡುತ್ತಾರೆ. ಅಲ್ಲಲ್ಲಿ ನಗೆಸ್ಪೋಟ ಇರುತ್ತದೆ.ಕಡೆಯಲ್ಲೊಂದು ಸಿಂಪಲ್ ಮೆಸೇಜ್ ಇಡುತ್ತಾರೆ.

'ಬೆಗ್ ಬಾರೋ ಅಳಿಯ' ನಾಟಕ ಈಗಾಗಲೇ ಟೈಮ್ ಟೆಸ್ಟೆಡ್ ಕಾಮಿಡಿಯಾಗಿದೆ.'ವಸುಧೈವ ಕುಟುಂಬಕಂ' ಎಂಬ ಉಪನಿಷತ್ ವಾಕ್ಯದಂತೆ ಕೂಡು ಕುಟುಂಬದ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ.'ಸ್ತ್ರೀ ಭ್ರೂಣಹತ್ಯೆ' ತಡೆಯುವ ಬಗ್ಗೆ ಇರುವ ಗಂಭೀರ ಚರ್ಚೆಗೆ ಹಾಸ್ಯಲೇಪನ ಮಾಡಲಾಗಿದೆ. ಸರಳ ರಂಗಸಜ್ಜಿಕೆ ಇರುವ ಇವರ ನಾಟಕಗಳನ್ನು ಸುಲಭವಾಗಿ ಅಭಿನಯಿಸಬಹುದು.

'ಸಂಭವಾಮಿ ಯುಗೇ ಯುಗೇ' ಒಂದು ರಾಜಕೀಯ ವಿಡಂಬನೆ. ಧರ್ಮದ ಅವನತಿಯಾದಾಗ ಒಳ್ಳೆಯ  ರಾಜಕಾರಣಿ ಹುಟ್ಟಿ ಬಂದು ಸುಧಾರಣೆ ತರುತ್ತಾನೆ ಎಂಬ ಆಶಯ ಇಲ್ಲಿದೆ. ಸಸ್ಪೆನ್ಸ್ ಥ್ರಿಲ್ಲರ್ ರೀತಿಯಲ್ಲಿ ನಾಟಕ ಪ್ರದರ್ಶಿಸಬಹುದು.ಹಳ್ಳಿ ಪೆದ್ದಿ ನಾಯಕಿ 'ಮಲ್ಲಿಕಾ ಶರಬತ್' ಪಾತ್ರ ಪ್ರತಿ ಎಂಟ್ರಿಯಲ್ಲೂ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಅಪಾಯವಿದೆ.

'ನೀ ನನಗಿದ್ದರೆ ನಾ ನಿನಗೆ' ನಾಟಕದಲ್ಲಿ ಇಂದಿನ ವೃದ್ಧಾಶ್ರಮಗಳಿಗೆ ಕಾರಣವೇನು ಎಂಬ ಬಗ್ಗೆ ಗಂಭೀರ ಚಿಂತನೆ ಇದೆ. ಹಸು ಹಾಲು ಕರೆಯುವುದು ನಿಲ್ಲಿಸಿದಾಗ, ನಿವೃತ ತಂದೆ ದುಡಿಯುವುದನ್ನು ನಿಲ್ಲಿಸಿದಾಗ ಮನೆಮಂದಿ ಯಾವ ರೀತಿ ಅವರನ್ನು ಕಾಣುತ್ತಾರೆ ಎಂಬುದು ಈ ನಾಟಕದ ವಸ್ತು. ಇಲ್ಲಿ ಬರುವ ಹಸು ಪಾತ್ರ ಪ್ರೇಕ್ಷಕರನ್ನು ರಂಜಿಸುತ್ತದೆ. ಮುಖ್ಯವಾಗಿ ಮಕ್ಕಳ ಮನಸ್ಸನ್ನು ಸೂರೆಗೊಳ್ಳುತ್ತದೆ. ಓದುವಾಗಲೇ ಸಾಕಷ್ಟು ನಗೆ ಎಬ್ಬಿಸುವ ಈ ನಾಟಕಗಳನ್ನು ಸಮರ್ಥ ರೀತಿಯಲ್ಲಿ ರಂಗಕ್ಕೆ ಅಳವಡಿಸಿದರೆ ನಾನ್ ಸ್ಟಾಪ್ ನಗೆ ಸಿಗುವುದಂತೂ ಗ್ಯಾರಂಟಿ.ಹಾಸ್ಯದ ಜೊತೆಗೆ ಸಮಾಜಕ್ಕೆ ಗಟ್ಟಿ ಸಂದೇಶ ರವಾನೆ ಆಗುತ್ತದೆ.

                                                                                                                                                                                                            -ಸಿಹಿ ಕಹಿ ಚಂದ್ರು 

ಎಂ.ಎಸ್.ನರಸಿಂಹಮೂರ್ತಿ

16 other products in the same category:

Product added to compare.