- New product
ಜೋಗಿ / Jogi
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 328
ಪುಸ್ತಕದ ಸಂಖ್ಯೆ:639
ISBN:
Reference: ಜಯಲಕ್ಷ್ಮಿ ಪಾಟೀಲ್
ಜಯಲಕ್ಷ್ಮಿ ಪಾಟೀಲ್ / Jayalakshmi Patil
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :240
ಪುಸ್ತಕದ ಸಂಖ್ಯೆ: 1009
ISBN : 978-93-48262-33-2
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಈ ಆತ್ಮನಿರೂಪಣೆಯ ಯಶಸ್ಸು ಎಲ್ಲಿರುತ್ತದೆ ಎಂದರೆ ಲೋಲುಪತೆಯಲ್ಲಿ ತೇಲದೆ, ಓದುಗರಿಗೆ ಆತ್ಮರತಿಯ ಆರಾಧನೆಯಾಗಿ ಕಾಣದೆ ಅವರನ್ನೂ ಸಹಪಯಣಿಗರಾಗಿ ಕರೆದೊಯ್ಯುವ ಸವಾಲನ್ನು ಇದು ಗೆದ್ದಿದೆ ಎನ್ನುವುದರಲ್ಲಿ. ಇದು ಬಲು ಕಷ್ಟದ್ದು.
ಜಯಲಕ್ಷ್ಮಿ ಪಾಟೀಲರ ತಿಟ್ಹತ್ತಿ ತಿರುಗಿ ಕೃತಿ ನಮಗೆ ಆಪ್ತವಾಗುವುದು ಈ ಮೂಲಗುಣವನ್ನು ಅದು ಉದ್ದಕ್ಕೂ ಉಳಿಸಿಕೊಂಡಿರುವ ಕಾರಣಕ್ಕೆ. ಲೋಕೋತ್ತರವಾದ ನನ್ನ ಬದುಕನ್ನು ಲೋಕಕ್ಕೆ ಪ್ರಸ್ತುತಪಡಿಸುತ್ತಿದ್ದೇನೆ ಎನ್ನುವ ಆತ್ಮಪ್ರತ್ಯಯಕ್ಕೆ ಅವಕಾಶವೇ ಇಲ್ಲದ, ಆದರೆ ನನ್ನ ಬದುಕು ನನಗೆ ಕೊಟ್ಟಿದ್ದರ ಬಗೆಗೆ ನನಗೆ ಅಂಥ ತಕರಾರುಗಳೇನೂ ಇಲ್ಲ, ಬದುಕು ಕೊಟ್ಟದ್ದರ ಬಗೆಗೆ ಕೃತಜ್ಞತೆಯೇ ಇದೆ ಎನ್ನುವ ಭಾವ ತನ್ನ ಬಳಗವನ್ನು ಮಾತ್ರವಲ್ಲ ಲೋಕದ ಬಳಗವನ್ನು ನೋಡುವ ನೋಟವನ್ನೇ ಪಲ್ಲಟಿಸಿಬಿಡುತ್ತದೆ. 'ಲೀಲೆಯಲಿ ಯಾವುದೂ ವಿಫಲಮಲ್ಲ' ಎನ್ನುವ ಲೋಕಗ್ರಹಿಕೆಯ ಶಕ್ತಿಯೇ ಅಪೂರ್ವವಾದುದು. ಯಶಸ್ವಿ ವೈದ್ಯರ ಮಗಳಾಗಿ, ಅಜ್ಜ ಅಜ್ಜಿಯರ ಅಚ್ಚೆಯ ಮೊಮ್ಮಗಳಾಗಿ, ಅಮ್ಮನ ಮನೆ ಅಜ್ಜಿಯ ಮನೆಯ ನಡುವಿನ ಓಡಾಟದಲ್ಲೇ ತನ್ನ ಶಿಕ್ಷಣವನ್ನು ಪೂರೈಸುವ ಹಾದಿಯ ಮಧ್ಯದಲ್ಲೇ ಗೃಹಿಣಿಯೂ ಆಗಿ ಚೌಕಟ್ಟಿನ ಬದುಕು, ಕಟ್ಟೆಯ ಕಲ್ಲು ಕಟ್ಟೆಗೆ ಕೂತ ನೂರೊಂದನೆಯ ವ್ಯಕ್ತಿತ್ವವಾಗಿ ಮುಗಿದುಹೋಗಿಬಿಡಬಹುದಾದ್ದು ತನ್ನದೇ ವ್ಯಕ್ತಿತ್ವದ ಗುರುತನ್ನು, ತಾವನ್ನು ಬಯಕೆ ಬರುವುದರ ಕಣ್ಣನ್ನೆಯಂತೆ ಪಡೆದುಕೊಳ್ಳುವುದರ ಪೂರ್ವರಂಗವಾಗಿ ಈ ನಿರೂಪಣೆಯಿದೆ.
ಎಂ.ಎಸ್.ಆಶಾದೇವಿ