"ಒಂದೊಂದು ತಲೆಗೂ ಒಂದೊಂದು ಬೆಲೆ" ಎಂ,ಆರ್,ದತ್ತಾತ್ರಿಯವರ ನಾಲ್ಕನೇ ಕಾದಂಬರಿ ನಗರ ಜೀವನದ ಚಿತ್ರಣ ಮತ್ತು ಆಧುನಿಕ ಬದುಕಿನ ಭಾವಸೂಕ್ಷ್ಮಗಳ ಮನಮುಟ್ಟುವ ಚಿತ್ರಣ ಈ ಕಾದಂಬರಿಯಲ್ಲಿದೆ. ಕಾದಂಬರಿಯ ಕೆಲವು ಸಾಲುಗಳು ಹೀಗಿವೆ ;

ಮನುಷ್ಯನನ್ನು ಧರ್ಮಭ್ರಷ್ಟಗೊಳಿಸಲು ಮಾಯೆಯು ಆವರಿಸಿಕೊಳ್ಳುವ ಪರಿ ಅನಂತವಾದುದು.ಆವರಿಸಿಕೊಳ್ಳಲು ತನಗೆ ಬೇಕಾದ್ದೆಲ್ಲವನ್ನು ಸೃಷ್ಟಿಸಿಕೊಳ್ಳುತ್ತದೆ.ಈ ಮಾರ್ಗಬಿಟ್ಟರೆ ಅನ್ಯಮಾರ್ಗವೇ ಇಲ್ಲವೆನ್ನುವ ಭ್ರಾಂತಿಯನ್ನು ಹುಟ್ಟುಹಾಕಿ ತನ್ನ ಮಾರ್ಗಕ್ಕೆ ನಿಮ್ಮನ್ನು ಸೆಳೆದುಕೊಳ್ಳುತ್ತದೆ.ಒಳ ಹೊರಗುಗಳನ್ನು ಬೇರೆಮಾಡಿ ಒಂದಕ್ಕೊಂದರ ಸಮತೋಲನವನ್ನು ತಪ್ಪಿಸುತ್ತದೆ.ತನ್ನ ಕಾರ್ಯಸಾಧನೆಗೆ ಶಬ್ದ,ಅರ್ಥ,ಭಾವ,ತರ್ಕಗಳೆಂಬ ತಂತಿಗಳನ್ನು ತನಗೆ ಬೇಕೆಂದಂತೆ ಮೀಟಿ ನಿಮ್ಮನ್ನು ತನಗೆ ತಕ್ಕಂತೆ ಶೃತಿಗೊಳಿಸಿಕೊಳ್ಳುತ್ತದೆ.

   ನೀವು ಹೇಳಿದ್ದು ಗೊತ್ತು ನಮಗೆ.ಹಾಗೆ ಮಾಡಬಾರದೆಂದು ಗೊತ್ತು.ಆದರೆ ನಮ್ಮ ನಿಜಸ್ಥಿತಿ ಬೇರೆಯೇ ಇದೆಯಲ್ಲವೇ?ಹೀಗೆ ಹೇಳುತ್ತಿದ್ದೇನೆ ಎಂದು ಬೇಸರಿಸಿಕೊಳ್ಳಬೇಡಿ.ನೀವು ಹೇಳಿದ್ದು ಆರ್ಮ್ ಚೇರ್ ಫಿಲಾಸಫಿಯಲ್ಲವೇ?

  ಒಂದು ಗವಿಯ ಬಳುವಳಿ ಸಾಕು ಮನೆ ಎಂದು ಕರೆಯಲು ಮತ್ತು ಜೀವಒಂದನ್ನು ಸೃಷ್ಟಿಸಲು.ಕತ್ತಲೆಯ ಗವಿಯಲ್ಲೇ ಸೃಷ್ಟಿ ನಿರಂತರವಾಗಿರುತ್ತದೆ.

  ಕೆನ್ನೆ ಕೆನ್ನೆಯೇ,ಕಲ್ಲು ಕಲ್ಲೇ, ಕಲ್ಲಿನ ಕೆನ್ನೆಗೆ ಮುತ್ತುಕೊಡಲಾಗದು,ಇದು ಬೇಡ ಸರ್ 

ಎಂ.ಆರ್ ದತ್ತಾತ್ರಿ

16 other products in the same category:

Product added to compare.