ಬಿ.ಟಿ. ಲಲಿತಾನಾಯಕ್ / B.T. Lalithanayak
ಚಿನ್ನಮ್ಮನ ಲಗ್ನ-1893 / Chinnammana Lagna - 1893
Reference: ಕೆ. ಸತ್ಯನಾರಾಯಣ
- Write a review
ಕೆ. ಸತ್ಯನಾರಾಯಣ / K. Sathyanarayana
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:176
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಕನ್ನಡದ ಮಹತ್ವದ ಬರಹಗಾರರಾದ ಡಾ. ಕೆ. ಸತ್ಯನಾರಾಯಣರವರು ಕುವೆಂಪುರವರ "ಮಲೆಗಳಲ್ಲಿ ಮದುಮಗಳು" ಕಾದಂಬರಿಯ ಓದಿಗಾಗಿ ತಾವು ಮಾಡಿಕೊಂಡಿದ್ದ ಟಿಪ್ಪಣಿಗಳ ಪುಸ್ತಕ "ಚಿನ್ನಮ್ಮನ ಲಗ್ನ-1893". ಈ ಪುಸ್ತಕ ಕುವೆಂಪು ಅವರ ಕಾದಂಬರಿಗಷ್ಟೇ ಅಲ್ಲದೆ ಸಾಹಿತ್ಯದ ಓದಿಗೂ ಒಂದು ಅತ್ಯುತ್ತಮ ಆಕರ ಗ್ರಂಥ. ಕಾದಂಬರಿಯ ಪ್ರತಿ ಅಧ್ಯಾಯವನ್ನು ಎಳೆ ಎಳೆಯಾಗಿ, ತುಲನಾತ್ಮಕವಾಗಿ ಪರೀಕ್ಷಿಸಿ, ಕಾದಂಬರಿಯ ಸಂಕೀರ್ಣತೆಯನ್ನು ಎಲ್ಲಿಯೂ ಮರೆಯದೆ, ಆಳವಾಗಿ ಮತ್ತು ಸಮಗ್ರವಾಗಿ ಚಿಂತಿಸಿ, ಈ ಪುಸ್ತಕವನ್ನು ಬರೆಯಲಾಗಿದೆ. ಸಾಹಿತ್ಯದ/ಕಾದಂಬರಿಯ ವಿಸ್ತಾರವನ್ನು ಗ್ರಹಿಸಲು ಅನುವು ಮಾಡಿಕೊಡುವ ಇಂತಹ ಪುಸ್ತಕಗಳು ಕನ್ನಡದಲ್ಲಿ ಇಲ್ಲವೆಂದೇ ಹೇಳಬಹುದು. ಕುವೆಂಪುರವರ ಕಥನಗಾರಿಕೆ ಯಾರನ್ನೇ ಆಗಲಿ ಬೆರಗುಗೊಳಿಸುವಂಥದ್ದು. ಆ ಬೆರಗನ್ನು ಅರ್ಥ ಮಾಡಿಕೊಳ್ಳಲು ಈ ಪುಸ್ತಕ ಎಲ್ಲ ರೀತಿಯಲ್ಲಿಯೂ ಸಹಾಯ ಮಾಡಬಲ್ಲದು."-ಪ್ರೊ. ಕೆ. ಸುಂದರರಾಜ್