ಪುರಾತನ ಕೇರಳ ಅಂದರೆ ಮಾಂತ್ರಿಕರ ತವರೂರು.ಜೊತೆಗೆ ನಿಗೂಢ ಜನಪದ ಕತೆಗಳಿಗೂ ಇಲ್ಲಿ ಕೊರತೆಯಿಲ್ಲ. ಅಂಥ ಅದ್ಭುತ ಜನಪದ ಕಲಾ ಭಂಡಾರ ನಮ್ಮ ನೆರೆರಾಜ್ಯವಾಗಿರುವ ಕೇರಳ (ಅಂದಿನ 'ಮಲಯಾಳ ದೇಶ)ದಲ್ಲಿದೆ. ಪಶ್ಚಿಮ ಘಟ್ಟಗಳು ಹಾಗೂ ಅರೇಬಿಯನ್ ಸಮುದ್ರದ ಮಟ್ಟದಲ್ಲಿ ಮುದುಡಿ ಮಲಗಿರುವ ಈ ಭೂಪ್ರದೇಶ ಯಕ್ಷ-ಯಕ್ಷಿ, ಕಿನ್ನರ-ಕಿನ್ನರಿಯರು, ಐಂದ್ರಜಾಲಿಕ ಪ್ರಯೋಗದ ಪ್ರಸಂಗಗಳು, ಜೊತೆಗೆ ಪಶು, ಪಕ್ಷಿ, ಪ್ರಾಣಿಗಳನ್ನು ತನ್ನ ಕಥಾ ಪರಂಪರೆಯಲ್ಲಿ ಹೊಂದಿದೆ.

ಅದರಿಂದ ಆಯ್ದ ಹಲವು ಕತೆಗಳ ಸಂಗ್ರಹವಿದು.

ಕೇರಳದ ಮಾಂತ್ರಿಕರು ಎಂದರೆ ಇಂದಿಗೂ ಎದೆ ಝಲ್ಲೆನ್ನುತ್ತದೆ. ಮಂತ್ರ ತಂತ್ರದ ಕತೆಗಳ ಜೊತೆಗೆ ಅನೇಕ ತಮಾಷೆಯ ಕತೆಗಳೂ ಇಲ್ಲಿವೆ. ಮಂತ್ರಕ್ಕೆ ಅಷ್ಟೊಂದು ಶಕ್ತಿ ಇದೆಯೇ? ಗೊತ್ತಿಲ್ಲ, ಆದರೆ ಇಲ್ಲಿಯ ಕಥೆಗಳಿಗಂತೂ ಆಕರ್ಷಕ ಮಾಂತ್ರಿಕ ಶಕ್ತಿಯಿದೆ.

ಡಾ| ಸಂಧ್ಯಾ ಎಸ್.ಪೈ

16 other products in the same category:

Product added to compare.