ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ನನ್ನೊಳಗೆ ದುರಾಸೆಯಂತೆ ಮೂಡಿದ ಪದ್ಯಗಳಿವು. ಬರೆಯಲೇ ಬೇಕು ಅನ್ನಿಸಿದಾಗ ಇವನ್ನು ಬರೆದು ಹಗುರಾಗಿದ್ದೇನೆ. ಈ ಪದ್ಯಗಳೆಲ್ಲ ಅಚಾನಕ ಬಂದು ಕದತಟ್ಟಿದ ಅಚ್ಚರಿಗಳಂತೆ ನನಗೆ ಕಂಡಿವೆ. ನಾನು ಬಾಗಿಲು ತೆರೆದು ಅವುಗಳನ್ನು ಒಳಗೆ ಬಿಟ್ಟುಕೊಳ್ಳುವುದನ್ನು ಬಿಟ್ಟು ಮತ್ತೇನೂ ಮಾಡಿಲ್ಲ. 

    ಪದ್ಯ ನನ್ನ ಮೊದಲ ಪ್ರೀತಿ ಭಾಷೆ,ಕಾಲ,ಪ್ರಕಾರ, ದೇಶ-ಯಾವುದರ ಹಂಗೂ ಇಲ್ಲದೇ ಓದಬಹುದಾದ ಸಾಹಿತ್ಯವೆಂದರೆ ಕವಿತೆ, ಕವಿತೆ ಎಲ್ಲಿಗೂ ಸೇರಿದ್ದಲ್ಲ. ಕವಿತೆ ಹಳೆಯದಾಗುವುದೂ ಇಲ್ಲ. ಯಾವಾಗ ನಾವು ಅದನ್ನು ಓದಲು ಶುರುಮಾಡುತ್ತೇವೋ ಆಗ ಅದು ಮತ್ತೆ ಹೊಸದಾಗಿ ಹುಟ್ಟುತ್ತದೆ. ಅಭಿಜಾತ ಅನ್ನುವ ಮಾತು ಸರಿಯಾಗಿ ಹೊಂದುವುದು ಕವಿತೆಗೇ .

                                                                                                                                                                                                            -ಜೋಗಿ  

ಜೋಗಿ

16 other products in the same category:

Product added to compare.