ಜೋಗಿಯವರ 'ನಿರ್ಗಮನ' ನಾಪತ್ತೆಯಾದ ಅಪ್ಪನನ್ನು ಹುಡುಕಿ ಹೊರಟ ಮಗನ ಕತೆ. ಮಗ ಪ್ರಭಾವಶಾಲಿ ಡಿಜಿಟಲ್ ಮಾಧ್ಯಮವೊಂದರ ಮುಖ್ಯಸ್ಥ. ಇದು ಕೇವಲ ಅಪ್ಪನ ಹುಟುಕಾಟವಾಗದೆ ತನ್ನನ್ನು ತಾನು ಬಗೆಯುವ ಕಥನ ಕೂಡಾ ಆಗುತ್ತದೆ. 

    ಮೀಡಿಯಾದ ಘೋರಮುಖ ಅದರ ರಾಜಕೀಯ ತಂತ್ರ ಕುತಂತ್ರದಲ್ಲಿ ಸಿಲುಕುವ ಬಗೆಯನ್ನು ಕಥಾನಾಯಕ ಅನಿರುದ್ಧ ಪ್ರತಿನಿಧಿಸುತ್ತಾನೆ. ಅಪ್ಪನೊಳಗಿನ ಹೋರಾಟಗಾರರನ್ನು ಅರಿಯುವ ಮಗನ ಪ್ರಯತ್ನ ಅವನೊಳಗಿನ ಪೊಳ್ಳುತನವನ್ನು ಅರಿಯುವಂತೆ ಮಾಡುತ್ತದೆ ಮಾತ್ರವಲ್ಲ, ನಿಜದ ಬೆಳಕಿನ ಹಾದಿಯನ್ನು ನಿಚ್ಚಳಗೊಳಿಸುತ್ತದೆ ಇಂದಿಗೆ ಅತ್ಯಂತ ಪ್ರಸ್ತುತವಾಗಿರುವ ಈ ಕೃತಿ ಹಲವಾರು ಸಂಘರ್ಷಗಳನ್ನು ಮುಖಾಮುಖಿಯಾಗಿಸುತ್ತದೆ. 

ಎಂದಿನಂತೆ ಜೋಗಿಯವರ ಕುತೂಹಲಕಾರಿ ಕಥನ ಶೈಲಿ ಒಂದು ಗುಕ್ಕಿನಲ್ಲಿ ಓದಿಸಿಕೊಳ್ಳುತ್ತದೆ. 

ಜೋಗಿ

16 other products in the same category:

Product added to compare.