ಅರಿವು ಗೆದ್ದಷ್ಟೂ ಅದು  ಅಜ್ಞಾತದ ಮುಂದೆ ಮಂಡಿಯೂರುತ್ತದೆ. ಕಾರಣ ಅಜ್ಞಾತದ ಕತ್ತಲು ಬಗೆದಷ್ಟೂ ದಟ್ಟವೂ ಅನಂತವೂ ಆಗುತ್ತದೆ. ನಮ್ಮ ಚಿತ್ತದ ಸುತ್ತ ಆವರಿಸಿಕೊಂಡಿರುವ ಅಜ್ಞಾತದ ಕತ್ತಲಿನೆಡೆಗೆ ಬೆಳಕು ಚೆಲ್ಲುವ ಒಂದೇ ದಾರಿ ಎಂದರೆ, ನಮ್ಮ ಚಿತ್ತವನ್ನು ಚಿತ್ತದಿಂದಲೇ ಅರಿಯಲು ಪ್ರಯತ್ನಿಸುವುದು. ಆಗ ಮೂಡುವ ಮಂದಬೆಳಕಿನಲ್ಲಿ ಜೀವ ಜಗತ್ತಿನ ಅದ್ಭುತಗಳು ಮಬ್ಬು ಮಬ್ಬಾಗಿ ಕಾಣತೊಡಗುತ್ತವೆ. ಅಸೂಯೆ, ದ್ವೇಷ ಮುಂತಾದವು ನಮ್ಮನ್ನು ಗೆದ್ದುಕೊಂಡಿರುವ ಪರಿ, ನಾವು ನಾವಲ್ಲ ಎಂಬ ಅಚ್ಚರಿ, ರಾವಣನಂತಹ ಶತ್ರುಗಳೇ ನಮ್ಮ ರಕ್ಷಕರಾಗಿರುವ ವೈಚಿತ್ರ್ಯ....ಮುಂತಾದವುಗಳ ಅಸ್ಪಷ್ಟ ಪರಿಚಯವಾಗತೊಡಗುತ್ತದೆ. ನಮ್ಮ ಚಿತ್ತದ ಅಜ್ಞಾತದತ್ತ ಒಂದು ಹೆಜ್ಜೆ ನಡೆಯುವುದೇ ಇಲ್ಲಿನ ಲೇಖನಗಳ ಉದ್ದೇಶ.  

ಡಾ. ಕೆ.ಎನ್. ಗಣೇಶಯ್ಯ

16 other products in the same category:

Product added to compare.