ಲೇಖಕನೊಬ್ಬ ಒಂದೇ ವಸ್ತುವಿನ ಸುತ್ತ ಕಥೆಗಳನ್ನು ರಚಿಸಿ, ಸಂಕಲನವನ್ನು ಪ್ರಕಟಿಸಿರುವುದು ತುಂಬಾ ಅಪರೂಪ. ವಿಶೇಷವೆಂದರೆ ಗಾಂಧಿ ಇಲ್ಲಿನ ಕಥೆಗಳ ವಸ್ತುವಾಗಿರುವುದು. ಇಲ್ಲಿರುವ ಹನ್ನೆರಡೂ ಕಥೆಗಳಲ್ಲಿ ಗಾಂಧಿ ವಿಭಿನ್ನ ನೆಲೆಗಳಲ್ಲಿ ಪ್ರಸ್ತಾಪಗೊಳ್ಳುತ್ತಾರೆ. ಸಂತೆ ಕಸಲಗೆರೆ ಪ್ರಕಾಶ್ ಅವರ ಈ ಸಂಕಲನದಲ್ಲಿರುವ ಕಥೆಗಳ ಕಲಾತ್ಮಕ ಯಶಸ್ಸು ಮತ್ತು ಮಿತಿಯನ್ನು ಕುರಿತು ಬರೆಯುವುದಕ್ಕಿಂತಲೂ ಹೆಚ್ಚು ಅವರು ಇಲ್ಲಿ ತೋರಿರುವ ಆಸಕ್ತಿ, ಒತ್ತಾಸೆಗಳ ಬಗ್ಗೆ ನಮಗೆ ಮೆಚ್ಚುಗೆ ಮೂಡುತ್ತದೆ. 

'ಪ್ರತಿಮೆ ಇಲ್ಲದ ಊರು' ಸಂಕಲನದ ಶೀರ್ಷಿಕೆಯಲ್ಲಿರುವ 'ಪ್ರತಿಮೆ' ಎಂಬ ಶಬ್ದವೇ ಕಲೆಯ ಒಂದು ಆಯಾಮವನ್ನು ಸೂಚಿಸುತ್ತದೆ. ಕಲೆ, ಕಲಾವಿದ, ಈ ಅಂಶಗಳುಳ್ಳ ಕೆಲವು ಕಥೆಗಳನ್ನು ಈ ಸಂಕಲದಲ್ಲಿ ಕಾಣುತ್ತೇವೆ. ಗಾಂಧೀಜಿಯವರ ಹಾಜರಿ ಹಲವು ಸ್ವರೂಪಗಳಲ್ಲಿ ಬರುವ ಇಲ್ಲಿನ ಕತೆಗಳ ಪ್ರಯೋಗ ಕುತೂಹಲಕಾರಿಯಾದದ್ದು.

                                                                                                                                                                                                -ಅಗ್ರಹಾರ ಕೃಷ್ಣಮೂರ್ತಿ  

ಸಂತೆಕಸಲಗೆರೆ ಪ್ರಕಾಶ್

16 other products in the same category:

Product added to compare.