'ಹಸ್ತಿನಾವತಿ' ಕಾದಂಬರಿ ಕುರಿತು ಜೋಗಿಯವರು ಹೇಳಿರುವ ಮಾತುಗಳು ಹೀಗಿವೆ: 

ಈ ಕಾಲದ ರಾಜಕಾರಣದ ಮೂಲಸೆಲೆಯನ್ನು ಹುಡುಕಿಕೊಂಡು ಹೊರಟ ಮನಸ್ಸು ಮಹಾಭಾರತದತ್ತ ಹೊರಳಿತು.ಅಲ್ಲಿನ ಘಟನೆಗಳಿಗೂ ಇಲ್ಲಿ ನಡೆಯುತ್ತಿರುವ ಘಟನೆಗಳಿಗೂ ಅಂತ ವ್ಯತ್ಯಾಸವೇ ಇಲ್ಲ ಅನ್ನಿಸತೊಡಗಿತು.ಎಲ್ಲ ಕಾಲಗಳಲ್ಲೂ ರಾಜಕಾರಣ  ಒಂದೊಂದು ಆಶಯವನ್ನು ಪ್ರತಿಪಾದಿಸುತ್ತಾ ಬಂದಿದೆ. ಹೀಗಾಗಿ ರಾಜಕಾರಣ ಅನ್ನುವುದು ಧರ್ಮಕಾರಣವೂ ಹೌದು.ಪ್ರತಿ ಯುಗದಲ್ಲೂ ನಡೆಯುವ ಕುರುಕ್ಷೇತ್ರ,ಮತ್ತೆ ಮತ್ತೆ ಬರೆಸಿಕೊಳ್ಳುವ ಮಹಾಭಾರತ, ಮತ್ತೆ ಮತ್ತೆ ಹುಟ್ಟುವ ಶ್ರೀಕೃಷ್ಣ,ಮತ್ತೆ ಮತ್ತೆ ಸಾಯುವ ದುರ್ಯೋಧನ - ಈ ಚಕ್ರ ನಿರಂತರ. ಆ ಚಕ್ರವನ್ನು ನೆತ್ತಿಯಲ್ಲಿ ಹೊತ್ತವನ ಕತೆ ಇದು.

ಕನ್ನಡದ ಮಹತ್ವದ ಲೇಖಕರಲ್ಲಿ ಒಬ್ಬರಾದ ಜೋಗಿಯವರ ಇಪ್ಪತ್ತನೆಯ ಕಾದಂಬರಿ ಇದು. ಒಂದು ರೀತಿಯಲ್ಲಿ ಪೊಲಿಟಿಕಲ್ ಥ್ರಿಲ್ಲರ್ ಎನ್ನಬಹುದಾದರೂ ತನ್ನೊಳಗೆ ತಾತ್ವಿಕ ಚಿಂತನೆಯನ್ನು ನಡೆಸುವ ಇಂದಿನ ಸಂದರ್ಭದ ಪ್ರಮುಖ ಕೃತಿ.

ಜೋಗಿ

16 other products in the same category:

Product added to compare.