ತಮ್ಮ ವಿಶಿಷ್ಟ ಕಥನ ಶೈಲಿಯಿಂದ ಎಲ್ಲ ತಲೆಮಾರಿನ ಕನ್ನಡ ಓದುಗ ವೃಂದವನ್ನು ಆಕರ್ಷಿಸಿದವರು ಕೆ.ಎನ್.ಗಣೇಶಯ್ಯ. ಸಾಹಿತ್ಯಲೋಕಕ್ಕೆ ವೈಜ್ಞಾನಿಕ ಪರಿಭಾಷೆಯನ್ನು ಹಾಗೂ ವಿಜ್ಞಾನ,ಇತಿಹಾಸದಲ್ಲಿ ಸೃಜನಶೀಲತೆಯ ಹುಡುಕಾಟವನ್ನು ನಡೆಸಿದವರು.ಅತ್ತಿತ್ತದವಲೋಕನ ಕೃತಿ ಕೂಡಾ ಇವರ ಈ ಬಗೆಯ ಪ್ರತಿಭೆಯನ್ನೇ ಹೇಳುವಂತಹಾ ಲೇಖನಗಳ ಸಂಕಲನ.

ಸಾವಿನಂತಹಾ ತಾತ್ವಿಕ ವಿಚಾರದಲ್ಲಿ,ಸೌಂದರ್ಯ ಪ್ರಜ್ಞೆಯಂತಹ ಅಪ್ಪಟ ದೈಹಿಕ ವಿಚಾರದ ಹಿನ್ನೆಲೆಯಲ್ಲಿ ಕೆ.ಎನ್.ಗಣೇಶಯ್ಯನವರು ನಡೆಸುವ ವೈಜ್ಞಾನಿಕ ಚಿಂತನೆ ಎಲ್ಲರನ್ನೂ ಆಲೋಚನೆಗೆ ಹಚ್ಚುವಂತದ್ದು.ಹಾಗೆಹೇ ಹಂಪೆಯ ಇತಿಹಾಸವನ್ನು ಕುರಿತ ಲೇಖನ,'ಕನ್ನಡ ಅಕ್ಷರ ಮಾಲೆಯ ರಾಜರಾಣಿಯರು ಯಾರು' ಎಂಬ ಲೇಖನಗಳಂತೂ ಅತ್ಯಂತ ಆಸಕ್ತಿದಾಯಕವಾಗಿದೆ ಮತ್ತು ಕನ್ನಡದಲ್ಲಿ ಈ ಬಗೆಯ ಮೊತ್ತ ಮೊದಲ ಬರಹಗಳಾಗಿವೆ.

ಡಾ. ಕೆ.ಎನ್. ಗಣೇಶಯ್ಯ

16 other products in the same category:

Product added to compare.