ಇದ್ದದ್ದನ್ನು ಇದ್ದಂತೆ ಹೇಳುವುದು ರವೀಂದ್ರ ಭಟ್ಟರ ಬರಹಗಳ ಲಕ್ಷಣ.ನೇರಾ ನೇರ ಮಾತು;ಸಾದಾಸೀದಾ ಅಭಿಪ್ರಾಯ,ಕ್ಲಿಷ್ಟತೆ ಇಲ್ಲ;ಸ್ಪಷ್ಟತೆ ಇದೆ.ಚುಚ್ಚು ಮಾತು ಇಲ್ಲ.ಬಿಚ್ಚು ಮಾತು ಇದೆ. ಬಹುಮುಖ್ಯವಾಗಿ ಸಮಕಾಲೀನ ರಾಜಕೀಯ ವಿದ್ಯಮಾನಗಳ ಸಂಕ್ಷಿಪ್ತ ಇತಿಹಾಸ ಇಲ್ಲಿದೆ.ಈ ಇತಿಹಾಸದ ಅಂಶವು ಘಟನಾವಳಿಗಳ ಉಲ್ಲೇಖನದಲ್ಲಿ ದಾಖಲಾಗಿವೆ.ಮುಂದೊಂದು ದಿನ ಇಂದಿನ ವಿದ್ಯಮಾನಗಳು ಇತಿಹಾಸದ ಅಂಶಗಳಾಗಿ ಮುಖ್ಯವಾಗುತ್ತವೆ.ಸಂವಹನದ ಕಾರಣಕ್ಕಾಗಿ ಸಂವೇದನೆ ಕುಂಠಿತವಾಗಿರುವುದು ರವೀಂದ್ರ ಭಟ್ಟರ ಬರಹಗಳ ಒಂದು ಮೌಲ್ಯವಾಗಿದೆ.ವಿಶೇಷವಾಗಿ ಸಮಕಾಲೀನ ರಾಜಕಾರಣಕ್ಕೆ ಮುಖಾಮುಖಿಯಾಗುವ ಅವರೊಳಗೆ,ಒಳಿತಿನ ಪರವಾದ ಸಂವೇದನಾಶೀಲ ತುಡಿತ ಜೀವಂತವಾಗಿದೆ.ಹೀಗಾಗಿಯೇ ಸಮಾಜದ ಒಳಿತನ್ನು ಬಯಸುವ ರಾಜಕಾರಣದ ಪರವಾಗಿ ಅವರ ಬರಹಗಳು ನೇರ ನುಡಿಯ ದನಿಯಾಗುತ್ತವೆ.ರಾಜಕಾರಣವೊಂದೇ ಅಲ್ಲ, ಅಂದಂದಿನ ಇತರೆ ವಿದ್ಯಮಾನಗಳಿಗೂ ಪ್ರತಿಕ್ರಿಯೆಯಾಗುತ್ತವೆ.

   ಇರುವುದನ್ನು ಇದ್ದಂತೆಯೇ ಹೇಳುತ್ತ,ಒಳಿತು - ಕೆಡಕುಗಳನ್ನು ವಿಂಗಡಿಸಿ ನಿರೂಪಿಸುವ ವಿಧಾನವನ್ನು ಈ ಕೃತಿಯುದ್ದಕ್ಕೂ ಕಾಣಬಹುದಾಗಿದೆ.ಏಕಮುಖೀ ಅಭಿಪ್ರಾಯದ ಬದಲು ಮತ್ತೊಂದು ಮಗ್ಗುಲ ಸತ್ಯವನ್ನು ಕಾಣುವ ಕಣ್ಣು ರವೀಂದ್ರ ಭಟ್ಟರ ಬರಹಗಳಲ್ಲಿದೆ.

                                                                                                                                                                                     -ಬರಗೂರು ರಾಮಚಂದ್ರಪ್ಪ 

ರವೀಂದ್ರ ಭಟ್ಟ ಐನಕೈ

16 other products in the same category:

Product added to compare.