ಕನ್ನಡದ ಹಿರಿಯ ಲೇಖಕರಾದ ಎಚ್.ಎಸ್ ವೆಂಕಟೇಶಮೂರ್ತಿ ಅವರು ಜಿ,ಎನ್ ರಂಗನಾಥ್ ಅವರ 'ಪುಟ್ಟ ಪಾದಗಳ ಪುಳಕ' ಲಲಿತ ಪ್ರಬಂಧವನ್ನು ಕುರಿತು ಹೀಗೆ ಹೇಳಿದ್ದಾರೆ.

ಕನ್ನಡದ ಹಿರಿಯ ಪತ್ರಿಕೋದ್ಯಮಿಯಾಗಿ ಸುವಿಖ್ಯಾತರಾಗಿರುವ ಜಿ.ಎನ್.ರಂಗನಾಥರಾವ್  ಕಥೆ,ನಾಟಕ,ವಿಮರ್ಶೆ,ಅನುವಾದಗಳಲ್ಲಿ ಮಹತ್ವದ ಸಾಧನೆ ಮಾಡಿದವರು.ಪತ್ರಿಕೋದ್ಯಮ ಲೇಖಕನ ಸೃಷ್ಟಿಶೀಲತೆಯನ್ನು ದಮನ ಮಾಡುತ್ತದೆ ಎಂಬ ಮಾತಿಗೆ ಅಪವಾದ ಎನ್ನಿಸುವಂಥವರು.ಅನುವಾದದಲ್ಲಂತೂ ಅವರ ಸಾಧನೆ ಅನನ್ಯವಾದದ್ದು.ಹೀಗೆ ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಘನವಾದ ಕೃತಿಗಳನ್ನು ರಚಿಸಿರುವ  ಜಿ,ಎನ್,ಆರ್ ಈಗ ಸೊಗಸಾದ ಲಲಿತ ಪ್ರಬಂಧಗಳ ಸಂಗ್ರಹವೊಂದನ್ನು ಪ್ರಕಟಿಸುತ್ತ ನನ್ನಲ್ಲಿ ಬೆರಗು ಉಂಟುಮಾಡಿದ್ದಾರೆ.ಪ್ರಬಂಧಕಾರನಿಗೆ ಇರಬೇಕಾದ ಸೂಕ್ಷ್ಮ ನಿರೀಕ್ಷಣಾ ಸಾಮರ್ಥ್ಯ,ಶೈಲಿಯ ಲಾಲಿತ್ಯ,ಅನುಭವದ ವಿಸ್ತಾರ,ಜೀವನ ದರ್ಶನ,ಭಾಷೆಯ ಬಳಕೆಯಲ್ಲಿ ನವುರಾದ ಹಾಸ್ಯ,ಚುರುಕು ಮುಟ್ಟಿಸುವ ಜಾಣ್ಮೆ ಮತ್ತು ನಯವಾದ ನವುರುಗಳಿಂದ ಕನ್ನಡದ ಮಹಾ ಪ್ರಬಂಧಕಾರರಾದ ಕುವೆಂಪು,ಪುತಿನ,ಶಿವರಾಮ ಕಾರಂತ,ಗೋರರು ರಾಮಸ್ವಾಮಿ ಅಯ್ಯಂಗಾರ್, ಎ.ಎನ್ ಮೂರ್ತಿರಾವ್,ದಬಾ ಕುಲಕರ್ಣಿ,ರಾಕು,ಎಸ್.ದಿವಾಕರ,ಕೆ.ಸತ್ಯನಾರಾಯಣ ಮೊದಲಾದವರ ಪಂಕ್ತಿಯಲ್ಲಿ ತಮ್ಮ ಹೆಸರನ್ನು ಜೋಡಿಸಿಕೊಂಡಿದ್ದಾರೆ.ಹರಕಲು ಬನೀನು,ಹೀಗೊಬ್ಬರು ವೈದ್ಯಭಾನು,ಏಕಾಂತ,ಪುಟ್ಟ ಪಾದದ ಪುಳಕಗಳು-ಅಂಥ ಪ್ರಬಂಧಗಳು  ನಮ್ಮ ಮನಸ್ಸನ್ನು ಗಾಢವಾಗಿ ಆಕ್ರಮಿಸುತ್ತವೆ.

     'ಸಂವೇದನೆಯೂ ಕೋವಿಡ್ ನ ಒಂದು ಮುಂಜಾನೆಯೂ'ಪ್ರಬಂಧ ಪ್ರಾಚೀನದಿಂದ ಅರ್ವಾಚೀನದವರೆಗೆ ಅವರ ವಸ್ತುವ್ಯಾಪ್ತಿ ಇರುವುದನ್ನು ಸೂಚಿಸುವಂತಿದೆ.ಹೀಗೊಬ್ಬರು ವೈದ್ಯಭಾನು ಅವರ ತೀರ್ಥರೂಪರ ವ್ಯಕ್ತಿಚಿತ್ರವನ್ನು ಜೀವಂತವಾಗಿ ಕಟ್ಟಿಕೊಡುವಲ್ಲಿ ಪುತಿನ ಅವರ ಗೋಕುಲಾಷ್ಟಮಿ ಪ್ರಬಂಧವನ್ನು ನೆನಪಿಸುವಂತಿದೆ.ಕನ್ನಡದ ಸಹಜ ನುಡಿಗಟ್ಟಿನ ಬಳಕೆ ಮತ್ತು ಭಾವ ತನ್ನಯತೆಯಿಂದಈ ಪ್ರಬಂಧವು ಕನ್ನಡದ ಶ್ರೇಷ್ಠ ಪ್ರಬಂಧಗಳ ಸಾಲಿಗೆ ಸೇರುವಂಥದ್ದಾಗಿದೆ.ಈಗ ಲಲಿತ ಪ್ರಬಂಧವಾಯಿತು,ಇಂಥ ಬೆರಗಿನ ಕ್ರಿಯಾಶೀಲ ಸರಕು ಮುಂದೆಯೂ ಈ ಮಾಗಿದ ಜೀವದ ಬತ್ತಳಿಕೆಯಿಂದ ಹೊರಬರಲಿದೆ ಎಂಬ ದೃಢವಿಶ್ವಾಸ ನನಗುಂಟು! 

ಜಿ.ಎನ್. ರಂಗನಾಥ ರಾವ್

16 other products in the same category:

Product added to compare.