ಡಾ.ನಾ ಮೊಗಸಾಲೆ ಕನ್ನಡದ ಹಿರಿಯ ಕಾದಂಬರಿಕಾರರು.ಅವರ ಲೇಖನಿಯ ಕ್ರಿಯಾಶೀಲತೆ ಮತ್ತು ಪ್ರಯೋಗಶೀಲತೆ ಅಚ್ಚರಿ ಅಭಿಮಾನ ಮೂಡಿಸುವಂತದ್ದು. ಮೂರು ತಲೆಮಾರುಗಳ ಆಧುನಿಕ ಚಿತ್ರಣವಿರುವ ಈ ಕಾದಂಬರಿ ಕುರಿತು'ವಿಮರ್ಶಕ ಎಚ್ ಎಸ್ ಸತ್ಯನಾರಾಯಣ ಹೀಗೆ ಹೇಳಿದ್ದಾರೆ.

'ನೀರಿನೊಳಗಿನ ಮಂಜು'ಎಂಬ ಶೀರ್ಷಿಕೆಯನ್ನೇ ತಾವು ಆಯ್ದುಕೊಂಡಿರುವ ವಸ್ತುವನ್ನು ಸೂಚ್ಯವಾಗಿ ಮಂಡಿಸಬಲ್ಲ ರೂಪಕವಾಗಿ ಮೊಗಸಾಲೆಯವರು ದುಡಿಸಿಕೊಂಡಿದ್ದಾರೆನ್ನಿಸುತ್ತದೆ.ಮಂಜುಗಡ್ಡೆ ನೀರಿನಲ್ಲಿ ತೇಲುವಾಗ ಅದರ ಮೂರು ಮಗ್ಗುಲು ಗೋಚರವಾದರೂ ಅಗೋಚರವಾದ ಮತ್ತೊಂದು ಮಗ್ಗುಲು ನೀರಿನಲ್ಲಿ ಮರೆಯಾಗುತ್ತದೆ.ಪೂರ್ಣವಾಗಿ ಅದರ ಸ್ವರೂಪವನ್ನರಿಯುವುದು ಅಸಾಧ್ಯವೇ ಸರಿ.ಮನುಷ್ಯ ಸಂಬಂಧಗಳಲ್ಲಿಯೂ ಹಾಗೆಯೆ!ನಮಗೆ ವ್ಯಕ್ತವಾಗದಿರುವ ಅವ್ಯಕ್ತ ಆಯಾಮವೊಂದು ಪ್ರತಿ ಸಂಬಂಧಗಳೊಳಗೂ ಹುದುಗಿರಬಹುದು.ನಿಕಟವರ್ತಿಗಳ,ಬಾಳ ಸಂಗಾತಿಗಳ ಅಂತರಂಗದ ಆಳವನ್ನು ಅರಿಯುವ ಉತ್ಕಟ ಬಯಕೆಯೊಂದು ಎಲ್ಲರೊಳಗೂ ತುಡಿಯುತ್ತಿದ್ದರೂ ಅದು ಅಷ್ಟು ಸುಲಭಕ್ಕೆ ತನ್ನ ಗುಟ್ಟನ್ನು ಬಿಟ್ಟುಕೊಡದೆ,ನೀರಿನೊಳಗಿನ ಮಂಜಿನ ಮರೆಯಾದ ಮೈಯ ಸ್ವರೂಪದಂತೆಯೇ ಮರೆಮಾಚಿಕೊಳ್ಳುವ ಗುಣ ಪಡೆದಿರುತ್ತದೆ.

  ಈ ಸೂತ್ರದ ಎಳೆಯನ್ನು ಹಿಡಿದು ಕಾದಂಬರಿಕಾರರು ಮನುಷ್ಯ ಸಂಬಂಧದ ಆಳವನ್ನು ಶೋಧಿಸುವ ಯತ್ನ ಮಾಡಿದ್ದಾರೆ.ಬೆಸೆದ ಎದೆಗಳೊಳಗೂ ಇರಬಹುದಾದ ಭಿನ್ನ ವಿಕಟ ಹಾಸ್ಯ ಮತ್ತು ಕೂಡಲಾರದೆದೆಯಾಳದಲ್ಲೂ ಕಾಣುವ ಏಕಸೂತ್ರ ಮನುಷ್ಯ ಸ್ವಭಾವದ ಸಂಕೀರ್ಣತೆಯನ್ನು ಎತ್ತಿ ಕಾಣಿಸುತ್ತದೆ. 

ನಾ ಮೊಗಸಾಲೆ

16 other products in the same category:

Product added to compare.