ಶೂದ್ರ ಶ್ರೀನಿವಾಸ್ / Shudra Srinivas
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :320
ಪುಸ್ತಕದ ಸಂಖ್ಯೆ: 733
ISBN: 978-93-87192-29-4
Reference: ಕರ್ಕಿ ಕೃಷ್ಣಮೂರ್ತಿ
ಕರ್ಕಿ ಕೃಷ್ಣಮೂರ್ತಿ / Karki Krishnamurthy
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :104
ISBN : 978-93-87192-34-8
ಪುಸ್ತಕದ ಸಂಖ್ಯೆ : 843
Your payments are 100% secure
Delivery between 2-8 days
No returns accepted, Please refer our full policy
ಕರ್ಕಿ ಕೃಷ್ಣಮೂರ್ತಿ ಕನ್ನಡದ ಯುವಬರಹಗಾರರಲ್ಲಿ ಗಮನಾರ್ಹ ಹೆಸರು.ಅವರು ತಮ್ಮ ಈ ಕಥಾ ಸಂಕಲನ 'ದಿಬ್ಬದಿಂದ ಹತ್ತಿರಕ್ಕೆ ಆಗಸಕ್ಕೆ' ಕುರಿತು ಹೇಳಿರುವ ಮಾತುಗಳು ಹೀಗಿವೆ.
"ತನಗೆ ಬೇಕಿರುವುದೇನೆಂಬ ಸ್ಪಷ್ಟ ಅರಿವಿಲ್ಲದೇ ಅದಕ್ಕಾಗಿ ಅರಸುವುದು ಆಧುನಿಕ ಮನುಷ್ಯನ ಲಕ್ಷಣವಾಗಿದೆ.ಸತ್ಯ ಶೋಧನೆಯ ಹಾದಿಯಲ್ಲಿ ನಮ್ಮ ಪೂರ್ವಿಕರು ಕಂಡುಕೊಂಡಿದ್ದ 'ನೇತಿ, ನೇತಿ'ಎನ್ನುವ ತತ್ವ ಪ್ರಯೋಗವನ್ನು:ನಾವಿಂದು,'ಇದಲ್ಲ ಇದೂ ಅಲ್ಲ'ಅನ್ನುತ್ತ ನಮ್ಮ ಸುಖದ ಅನ್ವೇಷಣೆಗೆ ಅಳವಡಿಸಿಕೊಂಡಿದ್ದೇವೆ.ಇರದಿರುವುದೇನೆಂದು ಗೊತ್ತಿಲ್ಲದೇ ತುಡಿಯುವ ಈ ಸ್ಥಿತಿ ವಿಭಿನ್ನ, ತೀಕ್ಷ್ಣ.ಸಾಲದೆಂಬಂತೆ ಜಾಗತೀಕರಣ,ನಗರವಾಸ ,ಕಾರ್ಪೊರೇಟ್ ವ್ಯವಸ್ಥೆ ಇತ್ಯಾದಿಗಳು ಆ ತುಡಿತದ ಕಾವಿಗೆ ಉರುವಲಾಗಿವೆ ಇಂದು.ಸಪ್ತ ಸಾಗರದಾಚೆಯ ದೇಶವೂ ನಮ್ಮ ನೆರೆಮನೆಯಷ್ಟೇ ಹತ್ತಿರವೆನಿಸಬಹುದಾದ ಕಾಲಘಟ್ಟದಲ್ಲೂ,ಈ ವಿದೇಶದ ಆಕರ್ಷಣೆ ನಮ್ಮಲ್ಲಿನ್ನೂ ಮಾಸಿಲ್ಲ.ಇದೂ ಆ ಅರಸುವಿಕೆಯ ಒಂದು ಭಾಗವೇ ಆಗಿರಬಹುದು.ಅಂಥಹುದೇ ಹುಡುಕಾಟದ,ವಿದೇಶಿ ನೆಲದ ಕಥೆಗಳೇ ಹೆಚ್ಚಿರುವ ಈ ಸಂಗ್ರಹಕ್ಕೆ'ದಿಬ್ಬದಿಂದ ಹತ್ತಿರ ಆಗಸಕ್ಕೆ'ಎನ್ನುವ ಹೆಸರು ಸೂಕ್ತ ಎನಿಸಿತು ನನಗೆ".