ಕುಮಾರಬೇಂದ್ರೆಯವರ ಕಥೆಗಳ ಸಂಕಲನ 'ಪರವಶ' ಈ ಸಂಕಲನದ ಕಥೆಗಳ ಪ್ರಧಾನಭಾವ ಪ್ರೀತಿ.ಕುಮಾರಬೇಂದ್ರೆ ಗಂಡು ಹೆಣ್ಣುಗಳ ನಡುವಣ ಆಕರ್ಷಣೆಯನ್ನು ನವಿರಾಗಿ ಮನಸ್ಸನ್ನು ಪ್ರಫುಲ್ಲಗೊಳಿಸುವಂತೆ ಬರೆಯಬಲ್ಲರು. ಇವರ ಕಥೆಗಳ ಕುರಿತು ಹಿರಿಯ ಕತೆಗಾರ ದಿವಾಕರ್ ಹೀಗೆ ಹೇಳಿದ್ದಾರೆ: 

ಇಷ್ಟೆಲ್ಲ ಇದ್ದೂ ಈ ಕತೆಗಳು ನಿರೂಪಿಸುತ್ತಿರುವ ಬದುಕಿನ ತುಣುಕುಗಳು ಅರಿವನ್ನು ಇನ್ನಷ್ಟು ತೀಕ್ಷ್ಣವಾಗಿ ಸ್ಪೋಟಿಸುವಷ್ಟು ಶಕ್ತವಾಗಿರಬಹುದಿತ್ತು ಎಂದು ಅನ್ನಿಸುತ್ತದೆ.ಇದಕ್ಕೆ ಕಾರಣ ಕುಮಾರ ಬೇಂದ್ರೆಯವರು ಕತೆಗಳ ವಿಕಾಸಕ್ಕೆ ಸಂಬಂಧಿಸಿದಂತೆ ತಮಗೆ ತಾವೇ ಹಾಕಿಕೊಂಡಿರುವ ಮಿತಿ. ಆದರೂ ಒಮ್ಮೊಮ್ಮೆ ಕೋಮಲತೆಯಿಂದ ,ಕೆಲವೊಮ್ಮೆ ವಿಷಾದದಿಂದ ಕೊನೆಯಾಗುವ ಇಲ್ಲಿನ ಕತೆಗಳು ತಮ್ಮ ಮನೋವಿಶ್ಲೇಷಣಾತ್ಮಕ ಒಳನೋಟಗಳಿಂದ ನಮ್ಮ ಮನಸ್ಸನ್ನು ವ್ಯಾಪಿಸಿಕೊಳ್ಳುತ್ತವೆ.ಕಳೆದುಹೋದ ಕಾಲದ ಹಾಗೂ ಅರ್ಧ ಹತ್ತಿಕ್ಕಲಾದ ಹಳಹಳಿಕೆ,ಮತ್ತೆ ಮತ್ತೆ ಹಿಂತಿರುಗಿ ಕಾಡುವ ನೆನಪುಗಳು,ಅಳಿಸಲಾಗದ ಜೀವನ ಚಿತ್ರಗಳು,ಮನುಷ್ಯನ ಆಶೋತ್ತರಗಳ ಆಶಾಶ್ವತತೆ,ಇವೆಲ್ಲವೂ ಇಲ್ಲಿ ಮಡುಗಟ್ಟಿವೆ.ಈ ಕತೆಗಾರರು ಪ್ರಯತ್ನ ಪಟ್ಟರೆ ಬದುಕಿನ ಅಗೋಚರ ವಾಸ್ತವಗಳನ್ನು ಹೊಳೆಹಿಸಬಲ್ಲ ಹಲವು ಆಯಾಮಗಳನ್ನು ಏಕಸೂತ್ರದಲ್ಲಿ ಹಿಡಿದುಕೊಡುಮ ಅತ್ಯುತ್ತಮ ಕತೆಗಳನ್ನು ಬರೆಯಬಲ್ಲರು ಎನ್ನುವುದಕ್ಕೆ ಈ ಸಂಕಲನವೇ ಸಾಕಷ್ಟು ಪುರಾವೆಯನ್ನು ಒದಗಿಸುತ್ತದೆ.ಕುಮಾರಬೇಂದ್ರೆಯವರ ಈ ಸಂಕಲನದ ಕತೆಗಳನ್ನು ಮೆಚ್ಚಿಕೊಳ್ಳುತ್ತಲೇ ನಾನು ಅವರ ಮುಂದಿನ ಕತೆಗಳಿಗಾಗಿ ಕಾಯುತ್ತಿದ್ದೇನೆ,ತುಂಬು ಕುತೂಹಲದಿಂದ.

                                                                                                                                                 

ಕುಮಾರಬೇಂದ್ರೆ

16 other products in the same category:

Product added to compare.