ಹಿರಿಯ ರಂಗಕರ್ಮಿ ಅಕ್ಷರ ಕೆವಿ ಅವರು ನಂದಕುಮಾರ ಅವರ ಕತೆಗಳನ್ನು ಕುರಿತು ಹೀಗೆ ಹೇಳಿದ್ದಾರೆ.

       "ಹೂವಿನ  ಹಡಗಲಿಯಂಥ  ಊರಿಂದ  ರಂಗವಿದ್ಯಾರ್ಥಿಯಾಗಿ ಬಂದ ನಂದಕುಮಾರರು ಕಳೆದ ನಾಲ್ಕಾರು ವರ್ಷಗಳಲ್ಲಿ ನಟನಾಗಿ,ಶಿಕ್ಷಕನಾಗಿ,ಸಂಘಟಕನಾಗಿ,ಮತ್ತೀಗ ಲೇಖಕನೂ ಆಗಿ ಬೆಳೆಯುತ್ತಿರುವುದು ಇಂಥ ಸಂತೋಷದ ವಿಸ್ಮಯಗಳಲ್ಲಿ ಒಂದು. ವಿದ್ಯಾರ್ಥಿಯಾಗಿದ್ದಾಗಲೇ ಒಂದು ದಿನ. ನಂದಕುಮಾರ್ ತಮ್ಮ ಕಥೆಗಳ ಕಟ್ಟಿನೊಂದಿಗೆ ನನ್ನ ಬಳಿ ಬಂದಿದ್ದರು. ಕನ್ನಡದಲ್ಲಿ ಈಗ ಬರುತ್ತಿರುವ ಬಹುತೇಕ ಕಥೆಗಳ ಹಾಗೆ ಅವರು ಬರೆದಿರಲಿಲ್ಲ. ಈ ಕಥೆಗಳು ಸಮಕಾಲೀನ ಕನ್ನಡದ ಕಥೆಗಳಿಗಿಂತ ಹೆಚ್ಚು ಬಯಲುಸೀಮೆಯ ಹಳ್ಳಿಗಳಿಂದ ಸಂಗ್ರಹಿಸಿಕೊಂಡು ಬಂದ ಜಾನಪದ ಆಖ್ಯಾಯಿಕೆಗಳ ಹಾಗಿದ್ದವು. ಈ 'ಕತಿಗುಳು' ಒಂದಕ್ಕಿಂತ ಇನ್ನೊಂದು ಬೇರೆಯಾಗಿವೆ, ಪ್ರತಿಯೊಂದೂ ವಿಭಿನ್ನ ಅನುಭವಗಳ ಅನ್ವೇಷಣೆಗೆ ಹೊರಡುತ್ತದೆ. ಆದರೆ, ಎರಡು ಪ್ರಮುಖ ಅಂಶಗಳು ಈ ಎಲ್ಲ ಕಥೆಗಳಿಗೆ ಸ್ಥಾಯಿಯಾಗಿವೆ. ಒಂದು- ಬಳ್ಳಾರಿ ಪ್ರಾಂತ್ಯದ ಬಯಲುಸೀಮೆಯ ಭಾಷೆ, ಎರಡು- ಒಂದು ಬಗೆಯ ಜಾನಪದ ನಿರೂಪಣೆಯ ಚೌಕಟ್ಟು. ಇದು ಕೇವಲ ಉಪಭಾಷೆಯ ಬಳಕೆಯಲ್ಲಿ ಮಾತ್ರವಲ್ಲ, ಭಾಷೆಯನ್ನು ಆಡುವ ನುಡಿಯಾಗಿ ನುಡಿಸುವ ವಿಧಾನದಲ್ಲಿ ಸ್ಪಷ್ಟವಾಗಿ ನನಗೆ ಕಾಣಿಸಿದೆ. ಇನ್ನು ಜಾನಪದ ಮಾದರಿಯ ಕಥನ ಕ್ರಮವು ಈ ಕಥೆಗಳಿಗೆ ಒಂದು ವಿಶೇಷವಾದ ವೈಶಿಷ್ಟ್ಯವನ್ನಂತೂ ಕೊಟ್ಟಿದೆ. ಈ ಯಾವ ಕಥನವೂ ನಿಜವಾಗಿ ನಡೆದ ಕಥೆಯಲ್ಲ. ಬದಲು, ಕಟ್ಟಿದ ಕಥೆ- ಎಂಬ ಅವ್ಯಕ್ತ ಸಂವಹನೆ ಈ ಕಥನದೊಳಗೆ ಅಡಕವಾಗಿದೆ. ಇದು ಸ್ವಭಾವೋಕ್ತಿಗಿಂತ ಭಿನ್ನವಾದ ಬೇರೆ ಬಗೆಯ ಕಥನವನ್ನು ಮಾಡುತ್ತಿದೆ ಎಂಬಂಥ ಸೂಚನೆ ಈ ಕತೆಗಳಲ್ಲಿರುವಂತೆ ತೋರುತ್ತದೆ".

ನಂದಕುಮಾರ ಜಿ,ಕೆ

16 other products in the same category:

Product added to compare.