"ಪದ್ಮನಾಭಭಟ್ ಶೇವ್ಕಾರರ 'ದೇವ್ರು' ಕಾದಂಬರಿ ಕುರಿತು ಕನ್ನಡದ ಪ್ರಸಿದ್ಧ ಕತೆಗಾರ ವಿವೇಕ ಶಾನುಭಾಗರು ಹೀಗೆ ಹೇಳಿದ್ದಾರೆ.

         ವಲಸೆಯಿಂದ ಹುಟ್ಟುವ ಘರ್ಷಣೆ ಮತ್ತು ಅನುಸಂಧಾನ ಮನುಷ್ಯ ಚರಿತ್ರೆಯ ಒಡಲಲ್ಲಿದೆ. ನೆಲೆ ಹುಡುಕುತ್ತ ಹೊರಟವರ ಚಲನಶೀಲತೆಯು ಇಂದು ಧರ್ಮ, ದೇಶ, ಭಾಷೆ, ವರ್ಣ ಇತ್ಯಾದಿಗಳ ನೆಪದಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ಇಂಥ ಮುಖ್ಯ ಸಮಸ್ಯೆಯೊಂದರ ಬಹುಮುಖಗಳನ್ನು ಅದರೆಲ್ಲ ಸಂಕೀರ್ಣತೆಯೊಡನೆ ಹಿಡಿಯುವ ಮಹತ್ವಾಕಾಂಕ್ಷೆ ಈ ಕಾದಂಬರಿಗಿದೆ. ಸಹ್ಯಾದ್ರಿ ತಪ್ಪಲಿನ ಹಳ್ಳಿಯೊಂದರ ಜೀವನವನ್ನು ಅದರ ಸೌಂದರ್ಯ,ಕ್ರೌರ್ಯ ಮತ್ತು ಕಟುವಾಸ್ತವತೆಯ ಹಿನ್ನೆಲೆಯಲ್ಲಿ ಶೋಧಿಸುತ್ತಲೇ ನಗರದ ಸಹವಾಸಗಳನ್ನೂ ಈ ಕಥನವು ಎದುರಿಗಿಡುತ್ತದೆ. ಆಧುನಿಕ ತಂತ್ರಜ್ಞಾನವು ನಮ್ಮೊಳಗೆ ಹುಟ್ಟಿಸಿರುವ ಹುಸಿ ತಿಳುವಳಿಕೆಯ ಅಹಂಕಾರದ ಪುಗ್ಗೆಯನ್ನು ಒಡೆಯುತ್ತ. ಮನುಷ್ಯ-ಪ್ರಕೃತಿಯ ಸಂಬಂಧದ ಜಟಿಲತೆಯನ್ನು ಅರಿಯಲು ಅಗತ್ಯವಿರುವ ತಾಳ್ಮೆ, ಸಂಯಮ, ವಿನಯಗಳ ಮಹತ್ವವನ್ನು ಮನಗಾಣಿಸುತ್ತದೆ. 

    ವಿಶಾಲವಾದ ಹರಹಿನ ಕೃತಿಯುದ್ದಕ್ಕೂ ಕಾಣುವ ಸೂಕ್ಷ್ಮಜ್ಞತೆ, ಬದುಕಿನ ವಿಪರ್ಯಾಸಗಳನ್ನು ಕಾಣುವಎಚ್ಚರ, ನಿಲುವಿಗಾಗಿ ಹಾತೊರೆಯುವ ಆತುರವಿಲ್ಲದ ಬರವಣಿಗೆಯು ಸಶಕ್ತ, ಪ್ರತಿಭಾವಂತ ಕಾದಂಬರಿಕಾರನ ಬರುವನ್ನು ಸಾರುತ್ತಿದೆ".

          

ಪದ್ಮನಾಭ ಭಟ್ ಶೇವ್ಕಾರ

16 other products in the same category:

Product added to compare.