"ಈವತ್ತು ಸ್ವಲೋಲುಪ್ತಿ ಮತ್ತು ಭೋಗಲಾಲಸೆಗಳು ಬದುಕನ್ನು ತೀವ್ರಗತಿಯಲ್ಲಿ ಆಕ್ರಮಿಸತೊಡಗಿವೆ. ಸ್ಪರ್ಧೆಯಲ್ಲಿ ಗೆಲ್ಲಲೇಬೇಕೆಂಬ ಹಪಾಹಪಿಯಲ್ಲಿ ಮನುಷ್ಯ ಅಪಾಯಕಾರಿ ವೇಗದಲ್ಲಿ ಓಡುತ್ತಿದ್ದಾನೆ. ಇಂಥ ಧಾವಂತದ ಓಟಕ್ಕೆ ಲೋಕಾನುಕಂಪೆ ಮತ್ತು ಸಮಚಿತ್ತದ ಧ್ಯಾನದ ನಿಲುಗಡೆ ಮಾತ್ರ ಸಮಾಧಾನ ಒದಗಿಸೀತು. ಹಾಗಾಗಿಯೇ ಬುದ್ಧನ ಚರಣ ಮತ್ತು ಚಾರಿತ್ರದ ಅನುಸಂಧಾನವು ಈವತ್ತು ಯಾವತ್ತಿಗಿಂತ ಹೆಚ್ಚಿನ ತುರ್ತು ಅಗತ್ಯವಾಗಿದೆ. ಬುದ್ಧ ಎನ್ನುವುದೊಂದು ವಿಶ್ವವ್ಯಾಪಿಯಾದ ಮಹಾಮಾನವತೆಯ ಪ್ರತಿಮೆ. ಬಸವನಾಗಿ, ಗಾಂಧಿಯಾಗಿ, ವಿನೋಬ ಆಗಿ, ಅಂಬೇಡ್ಕರ್ ಆಗಿ, ಬುದ್ಧನ ವ್ಯಕ್ತಿತ್ವದ ವರ್ಣಿಕೆಗಳು ಭಾರತದಲ್ಲಿ ಮತ್ತೆ ಮತ್ತೆ ಸಂಭವಿಸುತ್ತಲೇ ಇದ್ದಾವೆ. ಗತಿಸುವ ತನಕ ಸತ್ಪ್ರೇರಣೆಗಳನ್ನು ಸ್ವಾಗತಿಸುವುದೇ ಕೃತಕೃತ್ಯತೆಯ ಮಾರ್ಗವೆಂಬುದು ನನ್ನ ದೃಢವಾದ ನಂಬಿಕೆಯಾಗಿದೆ" ಎನ್ನುವ ಹೆಚ್.ಎಸ್.ವಿ. ಅವರ ಮಹಾಕಾವ್ಯ ಬುದ್ಧಚರಣ. ಕನ್ನಡದಲ್ಲಿ ಪ್ರಕಟವಾಗಿರುವ ಮಹತ್ವದ ಕೃತಿ.

ಎಚ್.ಎಸ್. ವೆಂಕಟೇಶಮೂರ್ತಿ

16 other products in the same category:

Product added to compare.