ಕನ್ನಡ ಸಾಹಿತ್ಯದಲ್ಲಿ ಸತ್ಯಕಾಮರದು ವಿಶಿಷ್ಟ ಹೆಸರು. ತಮ್ಮ ಅನುಭಾವಿ ಅವಧೂತ ದೃಷ್ಟಿಕೋನದಿಂದ ವಿಭಿನ್ನ ಸಾಹಿತ್ಯ ಸೃಷ್ಟಿಸಿದವರು. ತಾಂತ್ರಿಕ ಅನುಭವದ ಹಿನ್ನಲೆಯುಳ್ಳ ಅವರ ಅನೇಕ ಕೃತಿಗಳು ಅನನ್ಯವಾದ ಅನುಭವದ ಗಣಿಗಳು. 'ಸ್ವತಂತ್ರ ' ಕೃತಿ ಅವರ ಈ ತಾಂತ್ರಿಕ ಅನುಭವ ಲೋಕವನ್ನು ಅನಾವರಣ ಮಾಡುವಂತಹ  ಕನ್ನಡದಲ್ಲೇ ವಿಶಿಷ್ಟವೆನಿಸಿದ ಕೃತಿ.

    ಗುರು ಸತ್ಯಕಾಮರನ್ನು  ಕುರಿತು ವೀಣಾ ಅವರು ಹೀಗೆ ಹೇಳಿದ್ಧಾರೆ: 

ಚಂದಿರನೆಡೆಗೆ ಬೆರಳು 

 ಸತ್ಯಕಾಮ ಹುಟ್ಟಿನಿಂದ ಬೆಳೆದವರಲ್ಲ.

ಬೆಳೆಯಲೆಂದೇ ಹುಟ್ಟಿದವರು 

ಅದಕ್ಕೆ ಹುಟ್ಟಿದ ಮನೆಯನ್ನು ತೊರೆದರು.

ಹುಟ್ಟಿಲ್ಲವೆಂಬಂತೆ ಬೆಳೆದರು.

ಹುಟ್ಟು ಇಲ್ಲವಾಗುವುದೇ ಹುಟ್ಟಿನ ಗುಟ್ಟು.

ದೊಡ್ಡವರು ಮನೆ ತೊರೆದಿದ್ದಾರೆ.

ಆಯತನಕ್ಕೆ ಅನಿಕೇತನ ಬೇಕು.

ಸತ್ಯಕಾಮರು ನಿಕೇತನ ತೊರೆದ ಅನಂತ.

ಅವರ ಮೂಲ ಹೆಸರೂ ಅನಂತನೇ.

ಅವರು ಬರೆಹಕ್ಕಿಂತ ದೊಡ್ಡವರು.

ಬರೆಹ ಅವರಿಗಿಂತ ಚಿಕ್ಕದು. 

ದೊಡ್ಡದು ದೂರವಿದೆ ಎಂದೇ ಚಿಕ್ಕದಾಗಿ ಕಾಣಿಸುತ್ತದೆ.

ಅವರು"ಮುಚ್ಚಳವ  ಮೆಚ್ಚುವವರು"

ಹೊಸಬರಿಗೆ ಅವರು ಹಳಬರು.

ಹಳಬರಿಗೆ ಅವರು ಹೊಸಬರು.

ಇಬ್ಬರೂ ಅವರ ಕಡೆಗೊಮ್ಮೆ ನೋಡಬೇಕು 

ಈ ಕೃತಿ ಚಂದಿರನೆಡೆಗೆ ಬೆರಳು.....

ಸತ್ಯಕಾಮ

16 other products in the same category:

Product added to compare.