ಡಾ. ಪಾರ್ವತಿ ಜಿ  ಐತಾಳ್ ರವರು ಮಲೆಯಾಳಂ ನಿಂದ ಅನುವಾದಿಸಿರುವ ಲೇಖಕ ಪಾರಕ್ಕಡವು ರವರ ವಿಶಿಷ್ಟ ಕಥಾ ಸಂಕಲನವಿದು. 

ಮಲಯಾಳದ ಕಥಾ ಜಗತ್ತಿನಲ್ಲಿ ಭಿನ್ನ ಎಡೆಗಳನ್ನು ನಿರೂಪಿಸಿರುವ ಪಿ. ಕೆ. ಪಾರಕ್ಕಡವು ಅವರ ಮಿನಿ ಕಥೆಗಳು ತಮ್ಮ ಪುಟ್ಟ ಗಾತ್ರದಲ್ಲಿ ಮಹತ್ತನ್ನು ತೆರೆದಿಡುತ್ತವೆ. ಸೂಫಿಕಥೆಗಳ ದಾರ್ಶನಿಕ ಪ್ರಜ್ಞೆ, ನವಿರಾದ ಹಾಸ್ಯ- ಲಾಘುವತೆಗಳು ಈ ಕಥೆಗಳಿಗೆ ತೂಕ ನೀಡಿವೆ. ಏಕಕಾಲದಲ್ಲಿ ಕಣ್ಣುಕೋರೈಸುವ ನಕ್ಷತ್ರದ ಹೊಳಪಿನಂತೆಯೂ, ಓದುಗನ ಮನಸನ್ನು ಥಟ್ಟನೆ ಹಿಡಿದಿಡುವ ಉಲ್ಕೆಯಂತೆಯೂ ಕಾಣುವ ಕಥೆಗಳಿವು. ಕಾಲವು ನಕ್ಷತ್ರಗಳನ್ನು ಪೋಣಿಸಿ ಮಾಲೆಕಟ್ಟಿ ಆಗಸವನ್ನು ಸಿಂಗರಿಸುವಂತೆ ಕಾಣುವ ಈ ಕಥೆಗಳು ಬಹಳ ಎಚ್ಚರಿಕೆಯಿಂದ ಹೆಣೆದಂಥವು. ಇವುಗಳಲ್ಲಿ ಬದುಕಿನ ರಕ್ತ, ಕಣ್ಣೀರಿನ ಉಪ್ಪು ಮತ್ತು ಕನಸುಗಳ ದ್ರಾಕ್ಷಾರಸಗಳು ಸಮಪ್ರಮಾಣದಲ್ಲಿ ಕರಗಿ ಸೇರಿಕೊಂಡಿವೆ. ಆಧುನಿಕ ಬದುಕಿನ ನೋವು, ಹತಾಶೆ, ತಲ್ಲಣ, ಮಹಾಮೌನಗಳು, ಋತುಭೇದ ಹಾಗೂ ಪ್ರಣಯೋನ್ಮಾದಗಳು ಇಲ್ಲಿ ಅಂತರ್ಧಾರೆಯಾಗಿ ಪ್ರವಹಿಸುತ್ತವೆ. ಗಾಢವಾದ ಜೀವನಾನುಭವಗಳನ್ನು ಪುಟ್ಟ ಪುಟ್ಟ ವಾಕ್ಯಗಳಲ್ಲಿ ಹಿಡಿದಿಟ್ಟು ಕಾವ್ಯಾತ್ಮಕವಾಗಿ ಅತಿ ಸೂಚ್ಯವಿಧಾನದಲ್ಲಿ ಹೇಳುವ ಈ ಕಥೆಗಳಲ್ಲಿ ಒಂದು ಫಿಲಾಸಫಿಯೂ ಇದೆ.

ಅನು:ಡಾ. ಪಾರ್ವತಿ ಜಿ. ಐತಾಳ್

16 other products in the same category:

Product added to compare.