ಮಹಾಭಾರತ ಮೂಲ ಬಿಂದು ಶ್ರೀಕೃಷ್ಣ, ಕೃಷ್ಣನ ಪಾತ್ರ ಭಾರತದುದ್ದಕ್ಕೂ ಹಾಸು ಹೊಕ್ಕಾಗಿದೆ. ಈ ವಾಸುದೇವ ಕೃಷ್ಣನು ದ್ವಾರಕಾನಗರಿಯನ್ನು ಸಮುದ್ರದಲ್ಲಿ ನಿರ್ಮಿಸಿ ಯಾದವರೊಂದಿಗೆ ವಾಸಿಸುತ್ತಿದ್ದನೆಂದೂ ಈ ದ್ವಾರಕೆಯು ನಂತರ ಸಮುದ್ರದಲ್ಲಿ ಮುಳುಗಿ ಹೋಯಿತೆಂದೂ, ಮಹಾಭಾರತ ಹೇಳುತ್ತದೆ. ಈ ಘಟನೆಯ ಸತ್ಯಾಸತ್ಯತೆ ಎಷ್ಟು? ಕೃಷ್ಣ ನಿಜವಾಗಿಯೂ ಐತಿಹಾಸಿಕ ವ್ಯಕ್ತಿಯೇ? ಕೃಷ್ಣನ ದ್ವಾರಕೆ ಯಾವುದು? ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಡುಕಲು ಕೈಗೊಂಡ ವೈಜ್ಞಾನಿಕ ಸಮುದ್ರೀಯ ಪುರಾತತ್ವೀಯ ಉತ್ಖನನದ ಮಹತ್ವದ ಸಾಧನೆಯನ್ನು ಹೇಳುವುದೇ ಈ ಗ್ರಂಥದ ಉದ್ದೇಶ. 1980 ರಿಂದ ಈಚೆಗೆ ಹಲವಾರು ಅಭಿಯಾನಗಳನ್ನು ನಡೆಸಿ ಪುರಾತತ್ವಜ್ಞರು ಆಧಾರಭೂತವಾಗಿ ದ್ವಾರಕೆಯ ಅವಶೇಷಗಳನ್ನು ಬೆಳಕಿಗೆ ತಂದಿದ್ದಾರೆ.

ಎಸ್.ಆರ್. ರಾವ್

16 other products in the same category:

Product added to compare.