ತಂತ್ರದ ಬಗ್ಗೆ ಒಳ್ಳೆಯ ಮಾತಿಗಿಂತ, ಅದರ ನಿಜ ಸ್ವರೂಪವನ್ನು ಅರಿಯುವುದಕ್ಕಿಂತಲೂ ಅಪಪ್ರಚಾರವೇ ಹೆಚ್ಚು. ತಂತ್ರವೆಂದರೆ ಹೆಣ್ಣು, ಹೆಂಡ, ಭಯಂಕರ ಆರಾಧನೆ, ಬರೀ ಸ್ಮಶಾನ ಸಾಧನೆ ಎಂಬ ಭಾವನೆ ಸಾಮಾನ್ಯರಲ್ಲಿ ಇದೆ. ಇದರ ಜತೆಗೆ ವಿಕ್ಟೋರಿಯನ್ ಯುಗದ ಶೀಲ ಅಶ್ಲೀಲದ ಚೌಕಟ್ಟಿನಿಂದಲೂ ತಂತ್ರದ ಅರಿವು ಸಂಕೋಚಗೊಂಡಿತ್ತು. ಆಗ ತಂತ್ರದ ತಾಂತ್ರಿಕ ಮತ್ತು ವೈದಿಕ ಧಾರೆಗಳ ಪರಸ್ಪರ ಅವಲಂಬನೆ, ಪ್ರಭಾವವನ್ನು ತೆರೆದ ಹೃದಯದಿಂದ ಮುಕ್ತ ಮನಸ್ಸಿನಿಂದ ತೆರೆದು ತೋರಿಸಿದವರು ಸರ್ ಜಾನ್ ವುಡ್ರೋಫ್. ತಂತ್ರವನ್ನು ವಿದ್ವಾಂಸರು, ಯುವಕರು, ಪಾಶ್ಚಾತ್ಯರು ಎಂಬ ಭೇದವಿಲ್ಲದೆ ಎಲ್ಲರೂ ಓದಬಹುದು, ಓದಬೇಕು ಎಂದು ತಮ್ಮ ಬರೆಹಗಳು, ಅನುವಾದಗಳ ಮೂಲಕ ತೋರಿಸಿದ ಈ ಅಪ್ಪಟ ವಿಚಾರವಂತ, ಶ್ರದ್ಧಾಳುವಿನ ಬರೆಹ ತಂತ್ರಶಾಸ್ತ್ರ ಪ್ರವೇಶ (Introduction to Tantra Shastra). ಡಾ. ಜಿ.ಬಿ. ಹರೀಶ್ ವುಡ್ರೋಫ್ ಕೃತಿಯ ಸಮರ್ಥ ಅನುವಾದದ ಮೂಲಕ ಕನ್ನಡದ ಓದುಗರಿಗೆ ಹೊಸಲೋಕವೊಂದರ ಪರಿಚಯ ಮಾಡಿಕೊಟ್ಟಿದ್ದಾರೆ.

ಅನು:ಜಿ.ಬಿ. ಹರೀಶ

16 other products in the same category:

Product added to compare.