ಡಾ. ಎ.ಎನ್. ನಾಗರಾಜ್ ರವರು ಜೀವಶಾಸ್ತ್ರದ ಸಂಶೋಧಕರು. ಮನೋರೋಗ ವಿಜ್ಞಾನದಲ್ಲಿ ಕಳೆದ 50-60 ವರ್ಷಗಳಲ್ಲಿ ನಡೆದಿರುವ ಸಂಶೋಧನೆಗಳನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ. ತಮ್ಮ ಸಹಜ ಕೃಷಿಯ ಜೊತೆಗೆ ಹಲವಾರು ವರ್ಷಗಳಿಂದ ಅನೇಕರ ಆರೋಗ್ಯ ಸಮಸ್ಯೆಗಳಿಗೆ ಔಷಧರಹಿತ ಪರಿಹಾರಗಳನ್ನು ಸೂಚಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಅತಿ ತೂಕದ ಸಮಸ್ಯೆ, ಆರ್ಥರೈಟಿಸ್, ಅಸ್ತಮಾ, ಮಧುಮೇಹ, ಬೆನ್ನುನೋವು, ಅಧಿಕ ರಕ್ತದೊತ್ತಡ, ಹೃದಯ ಬೇನೆ ಇತ್ಯಾದಿ ಕಾಯಿಲೆಗಳನ್ನು ಯಾವೊಂದು ಔಷಧವಿಲ್ಲದೆ ವಾಸಿಮಾಡಿಕೊಳ್ಳಬಹುದು ಎಂದರೆ ನಂಬಲು ಸಾಧ್ಯವೇ? ಖಂಡಿತ ಸಾಧ್ಯ ಎನ್ನುತ್ತಾರೆ ಡಾ. ಎ.ಎನ್. ನಾಗರಾಜ್. ಆಹಾರ, ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವುದರ ಮೂಲಕ ಕಾಯಿಲೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬಹುದೆಂದು ಈ ಕೃತಿಯಲ್ಲಿ ಸವಿವರವಾಗಿ ದಾಖಲಿಸಿದ್ದಾರೆ.

ಡಾ. ಎ.ಎನ್. ನಾಗರಾಜ್

16 other products in the same category:

Product added to compare.