"ಈ ಕೃತಿ ಕೇವಲ ನಾಟಕಗಳ ವಿಮರ್ಶಾ ಗ್ರಂಥವಾಗಿರದೆ ಒಟ್ಟಾರೆ ಕನ್ನಡ ರಂಗಭೂಮಿ ಆದಿಯಿಂದ ಈ ಯುಗದ ಅಂತ್ಯದವರೆಗೆ ಬೆಳೆದು ಬಂದ ಬಗೆಯ ಅನುಸಂಧಾನದ ರಂಗಚರಿತ್ರೆಯಾಗಿದೆ. ಪುಸ್ತಕದ ಒಳ ಆಶಯ ಎಲ್ಲ ಆಧುನಿಕ ಪ್ರಯೋಗಶೀಲತೆಯನ್ನು ವಿನಯದಿಂದ ಗುರುತಿಸುವುದು ಮತ್ತು ಪ್ರಯೋಗಗಳನ್ನು ಒಂದು ನಿರ್ದಿಷ್ಟವಾದ ತಾತ್ವಿಕ ನೆಲೆಯಲ್ಲಿ ವಿಶ್ಲೇಷಿಸುವುದಾಗಿದೆ. ನಾಟಕ ಕೃತಿ, ರಂಗಕೃತಿ, ರಂಗನಿರ್ಮಿತಿ - ಹೀಗೆ ರಂಗ ಪ್ರಯೋಗದ ಎಲ್ಲ ಸ್ಥರಗಳ ತಾತ್ವಿಕ ವಿವರಗಳ ವಿದ್ವತ್ಪೂರ್ಣವಾದ ಚಿಂತನೆಯ ಜೊತೆಗೆ, ನಾಟಕ ಕಲೆಯ ವಿವಿಧ ಶೈಲಿಗಳ ಮಂಥನವನ್ನೂ ತನ್ನ ಒಡಲಿನಲ್ಲಿ ಹುದುಗಿಸಿಕೊಂಡಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಆಧುನಿಕ ರಂಗ ಚಳವಳಿಯ ಹರಸಾಹಸದ ಕಥನವಿದಾಗಿದೆ. ಚಿಕಿತ್ಸಕ ದೃಷ್ಟಿಯಿಂದ ದಾಖಲಿಸುವ ಜೊತೆಗೆ ಸಮಗ್ರವಾಗಿ ರಂಗಭೂಮಿ ವಿವರಗಳನ್ನು ನೀಡುವ ಈ ಕೃತಿ ರಂಗಕರ್ಮಿಗಳ ರಂಗ ಕೈಪಿಡಿಯಂತಿದೆ".-ಬಸವಲಿಂಗಯ್ಯ

ಡಾ. ಕೆ. ಮರುಳಸಿದ್ದಪ್ಪ

16 other products in the same category:

Product added to compare.