ಕನ್ನಡದ ಸುಪ್ರಸಿದ್ಧ ಜಾನಪದ ಗೀತೆಗಳೆಲ್ಲ ಒಂದೆಡೆ ಸಿಗುವ ಅಪರೂಪದ ಸಂಗ್ರಹ ಇದು. ಜಾನಪದ ಗಾಯಕರು ತಲೆಮಾರುಗಳಿಂದ ತಮ್ಮ ಸ್ಮøತಿಯಲ್ಲಿ, ಕಂಠದಲ್ಲಿ ಉಳಿಸಿಕೊಂಡು ಬಂದ ಕನ್ನಡದ ಹಲವು ಬಗೆಯ ಮಟ್ಟುಗಳು ಜೀವಂತ ಧ್ವನಿಯಾಗಿ ಈ ಗೀತೆಗಳಲ್ಲಿ ಉಲಿಯುತ್ತ ಮೈ-ಮನಗಳಿಗೆ ಮುದ ನೀಡುತ್ತವೆ. ದೈವಸ್ತುತಿ, ಸುಗ್ಗಿ, ಮದುವೆ, ಕೋಲಾಟ ಮೊದಲುಗೊಂಡ ಸಂತೋಷದ ರಸನಿಮಿಷಗಳನ್ನು ಕಣ್ಮುಂದೆ ಸುಳಿಸುವ ಗೀತೆಗಳೊಂದಿಗೆ, ದುಃಖದ ನೋವಿನ ಭಾವಸೆಳೆತದ ಗೀತೆಗಳೂ ಇಲ್ಲಿವೆ. ಕನ್ನಡ ಜನಪದ ಸಂಸ್ಕøತಿಯ ಗೀತಸಾಹಿತ್ಯವನ್ನು ತನ್ನೆಲ್ಲ ವೈವಿಧ್ಯತೆಯ ಲಯದೊಂದಿಗೆ ಓದಿನಲ್ಲಿಯೇ ಕಿವಿಗಳಲ್ಲಿ ಕೇಳಿಸುವ ಈ ಗೀತೆಗಳು ಜನಪದ ಗೀತೆಗಳ ಕಣಜವಾಗಿವೆ

ಸಂ: ಎನ್. ಪ್ರಭಾ

16 other products in the same category:

Product added to compare.