"ಬೆಂಗಳೂರೇ ಹಾಗೆ. ತಾಯಿಯಂತಲ್ಲ, ಪ್ರೇಯಸಿಯಂತಲ್ಲ, ಸಖನಂತಲ್ಲ, ಇಲ್ಲಿ ಬೇರು ಬಿಡುತ್ತೇನೆ ಅನ್ನುವುದು ಭ್ರಮೆ. ಬೆಂಗಳೂರು ನೆಲೆಯಲ್ಲ. ಫ್ಲಾಟ್ಫಾರ್ಮು. ನೆಲವಲ್ಲ, ರಿಯಲ್ ಎಸ್ಟೇಟು. ಈ ಊರಿಗೆ ನೆನಪುಗಳನ್ನು ಸೃಷ್ಟಿಸುವ ಶಕ್ತಿಯೂ ಇಲ್ಲ. ಇದೊಂದು ಕರ್ಮಭೂಮಿ. ಇಲ್ಲಿಗೆ ಮಂದಿ ದುಡಿಯುವುದಕ್ಕೆ ಬರುತ್ತಾರೆ. ಕೈದಿಗಳಂತೆ ದುಡಿಯುತ್ತಾರೆ. ಮತ್ತೆ ತಮ್ಮೂರಿಗೆ ಮರಳಬೇಕು ಎಂದು ಹಂಬಲಿಸುತ್ತಾರೆ. ಆದರೆ, ಬೆಂಗಳೂರು ಅವರನ್ನು ಮರಳಲು ಬಿಡುವುದಿಲ್ಲ. ಅಭಿಮನ್ಯುವಿನ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಈ ಚಕ್ರವ್ಯೂಹದ ಒಳಗೆ ಹೊಕ್ಕವರು ಹೋರಾಡಿಯೇ ಮಡಿಯಬೇಕು. ಯುದ್ಧ ಗೆದ್ದ ಸುದ್ದಿ ತಿಳಿಯುವ ಮೊದಲೇ ಅಸುನೀಗಬೇಕು" ಎಂದಿದ್ದಾರೆ ಲೇಖಕ ಜೋಗಿ. ತಲ್ಲಣ ಹುಟ್ಟಿಸುವ ಬೆಂಗಳೂರು ಮಾಲಿಕೆಯ ಅವರ ಕಾದಂಬರಿಗಳ ಪೈಕಿ ಇದು ಮೊದಲನೆಯ ಕಾದಂಬರಿ.

ಜೋಗಿ

16 other products in the same category:

Product added to compare.