ಜೊತೆಗಿದ್ದರೂ ಜೊತೆಗಿರಲಾರದ, ಸಮೀಪದಲ್ಲಿದ್ದರೂ ದೂರವಿದ್ದಂತೆ ಭಾಸವಾಗುವ, ನೂರೆಂಟು ಸಂಗತಿಗಳು ನಮ್ಮನ್ನು ಅತ್ತಿತ್ತ ಸೆಳೆಯುತ್ತ ಒಂದು ಕ್ಷಣ ಕೂಡ ಧ್ಯಾನಸ್ಥರಾಗದಂತೆ ತಡೆಯುವ ಕಾಲದಲ್ಲಿ ಸಾಂಗತ್ಯವೇ ವಿರಹ. ಜೊತೆಗಿದ್ದವನು ಜೊತೆಗಿಲ್ಲ ಅನ್ನಿಸುವುದು, ಹತ್ತಿರವಿದ್ದವಳು ದೂರದಲ್ಲಿದ್ದಾಳೆ ಎಂದು ಭಾಸವಾಗುವುದು, ನಮ್ಮವರು ನಮ್ಮವರಲ್ಲ ಎಂದು ತೋರುವುದು- ಇವೆಲ್ಲ ವಿರಹದ ಲಕ್ಷಣಗಳೇ. ವರ್ತಮಾನದ ಯಾವ ಭಾರವೂ ಇಲ್ಲದ ಸುಲಭವಾಗಿ ಎಲ್ಲೂ ನೋಡುವುದಕ್ಕೆ ಸಿಗದ, ಬೇರುಗಳ ಹಂಗೇ ಇಲ್ಲದ ಮೂರು ಪಾತ್ರಗಳ ಸೃಷ್ಟಿ ಇಲ್ಲಿದೆ. ಈ ಮೂವರಿಗೂ ಹಿನ್ನೆಲೆಯಿಲ್ಲ, ಹೇಳಿಕೊಟ್ಟಂತೆ ವರ್ತಿಸುವುದಿಲ್ಲ, ಅವರನ್ನು ಶಿಕ್ಷಣವೋ, ಸಾಹಿತ್ಯವೋ, ರಾಜಕೀಯವೋ ರೂಪಿಸಿಲ್ಲ. ಅವರು ಪ್ರೋಗ್ರಾಮ್ಡ್ ಅಲ್ಲ.-ಜೋಗಿಯವರ ಕುತೂಹಲ ಹುಟ್ಟಿಸುವ ಕಾದಂಬರಿ.

ಜೋಗಿ

16 other products in the same category:

Product added to compare.