ಮೂಕ ಧಾತು ಕಾದಂಬರಿ ಮನುಷ್ಯನ ವಿಕಾಸವನ್ನು ಕುರಿತದ್ದು. ನಮ್ಮೊಳಗಿದ್ದು ನಮ್ಮನ್ನಾಳುವ ಧಾತುಗಳು ಈ ಕಾದಂಬರಿಯ ಮುಖ್ಯ ವಸ್ತುವಾಗಿದೆ. ದೇವರು, ಧರ್ಮ, ವಿಜ್ಞಾನ, ನಾಗರಿಕತೆ, ಮನುಷ್ಯನಲ್ಲಿರುವ ಸ್ವಾರ್ಥ ಮತ್ತು ಆಸೆ ಈ ಎಲ್ಲಾ ವಿಚಾರಗಳ ಚರ್ಚೆಯನ್ನು ಈ ಕಾದಂಬರಿ ಒಳಗೊಂಡಿದೆ. ಹೇಗೆ ಈ ಸ್ವಾರ್ಥವೇ ಎಲ್ಲಾ ಜೀವಿಗಳ ವಿಕಾಸಕ್ಕೆ ಇಂಧನವಾಗಿದೆ ಜೊತೆಗೆ ವಿಕಾಸದ ಆದಿಯಲ್ಲಿ ಮಾನವ ಕಾಣಿಸಿಕೊಳ್ಳುವ ಗತಿಯನ್ನು ನಿರ್ಣಯಿಸುವ ಅಗೋಚರ ಶಕ್ತಿಯೂ ಆಗಿರುವುದು ಹೇಗೆಂಬುದನ್ನು ಈ ಕಾದಂಬರಿ ಪ್ರಮುಖವಾಗಿ ಚಿತ್ರಿಸುತ್ತದೆ.

ಡಾ. ಕೆ.ಎನ್. ಗಣೇಶಯ್ಯ

16 other products in the same category:

Product added to compare.