ಎಂದಿನಂತೆ ಜೋಗಿಯವರ ಅಪೂರ್ವ ಒಳನೋಟಗಳನ್ನು ಹೊಂದಿರುವ ಈ ಕಾದಂಬರಿ ಕಾಡಿನ ಕುರಿತ ಗ್ರಹಿಕೆಯ ಹಿನ್ನೆಲೆಯಲ್ಲಿ ರೂಪುಗೊಂಡಿದೆ. ಕತೆಕಾದಂಬರಿ ಗಳಲ್ಲಿ ಕಾಣಿಸಿಕೊಳ್ಳುವ ಕಾಡು ಕಾಲಕಾಲಕ್ಕೆ ಬದಲಾಗುತ್ತಾ ಸಾಗಿದೆ. ಕಾನೂನು ಹೆಗ್ಗಡಿತಿಯ ಕಾಡಲ್ಲಿ ಬೇಟೆ ಒಂದು ಸಂಭ್ರಮ. ಕಾರಂತರ ನಾಯಕನಿಗೆ ಕಾಡು ಕಡಿದು ಅಲ್ಲಿ ಹೊಲಗದ್ದೆ ಮಾಡುವುದು ವ್ಯಕ್ತಿಯ ಸಾಧನೆ, ಛಲದ ಪ್ರತೀಕ. ತೇಜಸ್ವಿಯವರಿಗೆ ಕಾಡಿನ ನಿಗೂಢಗಳ ಕುರಿತು ಅತೀವ ಬೆರಗು. ಅದೊಂದು ಮುಗಿಯದ ಅಚ್ಚರಿಯ ಸಂತೆ.

ಜೋಗಿ

16 other products in the same category:

Product added to compare.